ಹಾರ್ದಿಕ್ ಹಿಮಾಂಶು ಪಾಂಡ್ಯ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ.ಇವರು ಬಲಗೈ ಬ್ಯಾಟ್ಸ್‌ಮನ್ ಹಾಗು ಮಧ್ಯಮ ವೇಗದ ಬೌಲರ್.ಐಪಿಎಲ್‍ನಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕಾಗಿ ಆಡುತ್ತಾರೆ. == ಆರಂಭಿಕ ಜೀವನ == ಇವರು ೧೧ನೇ ಅಕ್ಟೋಬರ್ ೧೯೯೩, ಸೂರತ್, ಗುಜರಾತ್ನಲ್ಲಿ ಜನಿಸಿದರು. ಆರ್ಥಿಕವಾಗಿ ದುರ್ಬಲವಾಗಿದ್ದ, ಪಾಂಡ್ಯ ಕುಟುಂಬವು ಗೋರ್ವಾದಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕ್ರಿಕೆಟ್‌ನಲ್ಲಿ ಕೇಂದ್ರೀಕರಿಸುವ ಸಲುವಾಗಿ ಹಾರ್ದಿಕ್ ಪಾಂಡ್ಯ, ಎಂ.ಕೆ. ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯವರೆಗೆ ಅಧ್ಯಯನ ಮಾಡಿ ನಂತರ ತಮ್ಮ ಶಿಕ್ಷಣವನ್ನ ನಿಲ್ಲಿಸಿದರು.ಹಾರ್ದಿಕ್ ಕಿರಿಯ-ಮಟ್ಟದ ಕ್ರಿಕೆಟ್ ನಲ್ಲಿ ಸ್ಥಿರವಾದ ಪ್ರಗತಿ ಮಾಡಿದರು. ಕ್ರುನಾಲ್ (ಹಾರ್ದಿಕ್ ಪಾಂಡ್ಯನ ಸಹೋದರ) ಪ್ರಕಾರ, "ಕ್ಲಬ್ ಕ್ರಿಕೆಟ್ನಲ್ಲಿ ಸಾಕಷ್ಟು ಪಂದ್ಯಗಳನ್ನು ಒಬ್ಬಂಟಿಯಾಗಿಯೆ ಗೆದ್ದಿದ್ದಾರೆ". == ವೃತ್ತಿ ಜೀವನ == === ಅಂತರರಾಷ್ಟ್ರೀಯ ಕ್ರಿಕೆಟ್ === ಜನವರಿ ೨೭, ೨೦೧೬ರಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.ಅಕ್ಟೊಬರ್ ೧೬, ೨೦೧೬ರಲ್ಲಿ ನ್ಯೂ ಜೀಲ್ಯಾಂಡ್ ವಿರುದ್ಧ ನಡೆದ ಏಕದಿನ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು. ಜುಲೈ ೨೭, ೨೦೧೭ರಲ್ಲಿ ಶ್ರೀಲಂಕ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು. === ಐಪಿಎಲ್ ಕ್ರಿಕೆಟ್ === ಐಪಿಎಲ್ ೨೦೧೫ ರಲ್ಲಿ ಮುಂಬೈ ಇಂಡಿಯನ್ಸ್ ಪರ ಐ.ಪಿ.ಎಲ್.ನಲ್ಲಿ ಪಾದಾರ್ಪನೆ ಮಾಡಿದರು.ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಾವು ಎದುರಿಸಿದ ೮ ಎಸೆತಗಳಲ್ಲಿ ೨೧ ರನ್ ಗಳಿಸಿ ಮುಂಬೈಗೆ ೬ ವಿಕೇಟ್ಗಳ ಜಯ ದಾಖಲಿಸಿದರು.ಇದೇ ಪಂದ್ಯದಲ್ಲಿ ೩ ಪ್ರಮುಖ ಕ್ಯಾಚ್ಗಳನ್ನು ಗಳಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಆ ಪಂದ್ಯದ ನಂತರ, ಸಚಿನ್ ತೆಂಡುಲ್ಕರ್ ಅವರು ಹಾರ್ದಿಕ್‍ರನ್ನು ಕರೆಮಾಡಿ, ಮುಂದಿನ ೧೮ ತಿಂಗಳುಗಳಲ್ಲಿ ಭಾರತಕ್ಕಾಗಿ ಅವರು ಆಡಲಿದ್ದಾರೆ ಎಂದು ತಿಳಿಸಿದರು.ಮುಂದಿನ ವರ್ಷವೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಗ್ರ ೪ ತಂಡಗಳ ಸ್ಪರ್ಧೆಯಲ್ಲಿ ಉಳಿಯಲು ಗೆಲ್ಲಲೇಬೇಕಾದ ಪಂದ್ಯದಲ್ಲಿ, ೩೧ ಎಸೆತಗಳಲ್ಲಿ ೬೧ ರನ್ ಗಳಿಸಿದರು ಮತ್ತು ಋತುವಿನಲ್ಲಿ ತಮ್ಮ ಎರಡನೆಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. == ಸಾಧನೆಗಳು == ೧೮ ಜೂನ್ ೦೧೭ ರಂದು ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿಯ ಪ್ರತಿಷ್ಠಿತ ಸರಣಿಯ ಫೈನಲ್ ಪಂದ್ಯದಲ್ಲಿ ಅವರು ೪೩ ಎಸೆತಗಳಲ್ಲಿ ೭೬ ರನ್ ಗಳಿಸಿ ಅತ್ಯಂತ ವೇಗದ ಅರ್ಧಶತಕವನ್ನು ದಾಖಲಿಸಿದ ಆಟಗಾರರಾದರು,ಕೇವಲ ೩೨ ಎಸೆತಗಳಲ್ಲಿ ೫೦ ರನ್ ಸೇರಿದ್ದವು. === ಟೆಸ್ಟ್ ಕ್ರಿಕೆಟ್ === ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ (೨೬ ರನ್). ಎಂಟನೇ ಕ್ರಮಾಂಕದಲ್ಲಿ ವೇಗದ ಶತಕ ಗಳಿಸಿದ ಆಟಗಾರ (೧೦೮ ರನ್, ೮೬ ಎಸೆತ). ಇನಿಂಗ್ಸ್ ಒಂದರಲ್ಲೇ ೦೭ ಸಿಕ್ಸರ್ ಗಳಿಸಿದ ಭಾರತದ ೨ನೇ ಆಟಗಾರ. == ವೈಯಕ್ತಿಕ ಜೀವನ == ಪಾಂಡ್ಯ ೧ ಜನವರಿ ೨೦೨೦ ರಂದು ನಟಿ ನತಾಶ ಸ್ಟಾಂಕೋವಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. == ಪ್ರಶಸ್ತಿಗಳು == ೧೬ ಅಕ್ತೋಬರ್ ೨೦೧೬, ಧರ್ಮಶಾಲದಲ್ಲಿ ನ್ಯೂ ಜೀಲ್ಯಾಂಡ್ ವಿರುದ್ಧ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. == ಗ್ಯಾಲರಿ == == ಉಲ್ಲೇಖಗಳು ==